ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕರ್ನಾಟಕದ ಹಕ್ಕುಗಳು, ಕನ್ನಡ ಭಾಷೆಯ ಗೌರವ ಹಾಗೂ ಕನ್ನಡಿಗರ ಸ್ವಾಭಿಮಾನವನ್ನು ಕಾಪಾಡುವ ಉದ್ದೇಶದಿಂದ ಸ್ಥಾಪಿತವಾದ ಜನಪರ ಸಂಘಟನೆ. ಸ್ಥಳೀಯ ಜನರಿಗೆ ಉದ್ಯೋಗದಲ್ಲಿ ನ್ಯಾಯ ಸಿಗಬೇಕು, ಆಡಳಿತ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ದೊರಕಬೇಕು ಎಂಬ ದೃಷ್ಟಿಯಿಂದ ನಾವು ನಿರಂತರವಾಗಿ ಹೋರಾಟ ನಡೆಸುತ್ತೇವೆ. ಯಾವುದೇ ರಾಜಕೀಯ ಲಾಭವಿಲ್ಲದೆ, ನಾಡಿನ ಹಿತವೇ ನಮ್ಮ ಕಾರ್ಯದ ಕೇಂದ್ರಬಿಂದುವಾಗಿದೆ.
ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಮತ್ತು ಜನಜೀವನದ ರಕ್ಷಣೆಯೇ ನಮ್ಮ ಪ್ರಧಾನ ಧ್ಯೇಯ. ಕರ್ನಾಟಕದ ಸಂಪತ್ತನ್ನು ರಕ್ಷಿಸಿ, ಮುಂದಿನ ತಲೆಮಾರಿಗೆ ಸುರಕ್ಷಿತ ಹಾಗೂ ಗೌರವಯುತ ಭವಿಷ್ಯ ನೀಡುವ ಸಂಕಲ್ಪ ನಮ್ಮದು. ಕನ್ನಡಿಗನು ತನ್ನ ನಾಡಿನಲ್ಲಿ ಹೆಮ್ಮೆಯಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂಬುದೇ ನಮ್ಮ ಹೋರಾಟ ಮತ್ತು ಸೇವೆಗಳ ಮೂಲ ಉದ್ದೇಶ.