Warning: Constant WP_USE_THEMES already defined in /home/u556585232/domains/karnatakarakshanavedike.in/public_html/index.php on line 1
ಹೋರಾಟಗಳು – Karnataka Rakshana Vedike

ಮಾನ್ಯ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ ಸೋಮಣ್ಣ ನವರಿಗೆ ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಸಂದರ್ಭ

ರೈಲ್ವೆ ಇಲಾಖೆಯ ಅನೇಕ ಹುದ್ದೆಗಳ ಆಯ್ಕೆಗಾಗಿ ನಡೆಯುತ್ತಿರುವ ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಪ್ರಶ್ನೆ ಪತ್ರಿಕೆ ಇಲ್ಲದಿರುವುದನ್ನು ಖಂಡಿಸಿ ದಿನಾಂಕ 19 ಮಾರ್ಚ್ 2026ರಂದು ಮಾನ್ಯ ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ ಸೋಮಣ್ಣನವರಿಗೆ ಹಲವಾರು ಸಂಘಟನೆಯ ಪ್ರಮುಖರೊಂದಿಗೆ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಸಂದರ್ಭ. ಈ ಸಂದರ್ಭದಲ್ಲಿ ಕೇಂದ್ರದ ರಾಜ್ಯ ರೈಲ್ವೆ ಸಚಿವರು ಹೋರಾಟಗಾರರ ಭಾವನೆಗೆ ಸ್ಪಂದಿಸಿ ಈ ಕೂಡಲೇ ಆಗಿರುವ ಅನ್ಯಾಯವನ್ನು ಸರಿ ಮಾಡಿತ್ತೇನೆಂದು ತಿಳಿಸಿದರು ,

ಆಂಗ್ಲ ಭಾಷೆಯ ಬ್ಯಾನರ್ ತೆರೆವು

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕುಶಾಲನಗರ ರಥ ಬೀದಿಯಲ್ಲಿರುವ ಬಟ್ಟೆ ಅಂಗಡಿಯ ಬ್ಯಾನರ್ ಸಂಪೂರ್ಣ ಆಂಗ್ಲ ಭಾಷೆಯಲ್ಲಿ ಇರುವುದನ್ನು ಗಮನಿಸಿ ಬ್ಯಾನರ್ ತೆರೆವು ಗೊಳಿಸಲಾಯಿತು

ಪ್ರತಿಭಟನೆ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ

ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸರ್ಕಾರಿ ಹೊರಗುತ್ತಿಗೆ ನೌಕರರ ಮೇಲೆ ಅಧಿಕಾರಿಗಳು ಮಾಡುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇಂದು , ಬಾಗಲಕೋಟೆ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ನೇತೃತ್ವದಲ್ಲಿ ಪ್ರತಿಭಟನೆ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬ್ಯಾಂಕ್ ಮ್ಯಾನೇಜರ್ ಅವರ ವಿರುದ್ಧ ಪ್ರತಿಭಟನೆ

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ 10-02-26 ರಂದು ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಪ್ರತಿಭಟನೆ ಮಾಡಲಾಗಿದೆ ಕನ್ನಡ ಭಾಷೆಗೆ ಅವಮಾನ ಮಾಡುತ್ತಿರುವ ಬ್ಯಾಂಕ್ ಮ್ಯಾನೇಜರ್ ಅವರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ

ಉದ್ಯಾನದಲ್ಲಿ ಕಟ್ಟಡ ನಿರ್ಮಾಣ ಸ್ಥಗಿತಕ್ಕೆ ಸಮ್ಮತ:ಹೋರಾಟಕ್ಕೆ ಮಣಿದ ಮಿಮ್ಸ್

ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಡ್ಯ ಜಿಲ್ಲೆಯ ವಿಮ್ಸ್ ಪಾರ್ಕ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಾರಿ ವಿರೋಧ ವ್ಯಕ್ತಪಡಿಸಿ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಹೋರಾಟ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿತ್ತು ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ತಕ್ಷಣ ಕಾಮಗಾರಿ ಸ್ಥಗಿತಗೊಳಿಸಲು ಸೂಚನೆಯನ್ನು ನೀಡಿದೆ

ವತಿಯಿಂದ 371 (ಜೆ) ಸಂವಿಧಾನ ತಿದ್ದುಪಡಿ ಹೋರಾಟ

ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅಂದು ರಾಯಚೂರು ಜಿಲ್ಲಾಘಟಕದ ವತಿಯಿಂದ 371 (ಜೆ) ಸಂವಿಧಾನ ತಿದ್ದುಪಡಿ ಹೋರಾಟದಲ್ಲಿ, ರಾಯಚೂರು ರೈಲ್ವೆ ನಿಲ್ದಾಣ, ಅರೆಬೆತ್ತಲೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವ ಭಾವಚಿತ್ರ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ಪ್ರತಿಭಟನೆ

ಸರ್ಕಾರದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ಅಂದು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಘಟಕದ ವತಿಯಿಂದ ಬಾರಿ ಪ್ರತಿಭಟನೆ ನಡೆಸಲಾಯಿತು

ನೀರು ಸರಬರಾಜಿಗೆ ವಿರೋಧಿಸಿ ರಸ್ತೆ

ಶಿವರಾಮೇಗೌಡ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಯಚೂರು ನಗರದಲ್ಲಿ ಕುಡಿಯುವ ಕಲುಷಿತ ನೀರು ಸರಬರಾಜಿಗೆ ವಿರೋಧಿಸಿ ರಸ್ತೆ ತಡೆ ಮಾಡಿದಾಗ ಪೊಲೀಸರು ಬಂಧಿಸಿ ಬಿಡುಗಡೆ ಮಾಡಲಾಯಿತು.

ಅನುಮತಿ ಇಲ್ಲದೇ ಮರಗಳ ಮಾರಣಹೋಮ

ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್​ ತವರು ಕ್ಷೇತ್ರದಲ್ಲಿ ಮರಗಳ ಮಾರಣಹೋಮ ನಡೆದಿತ್ತು. ಇದರ ವಿರುದ್ಧ . ಮರಗಳನ್ನು ಕಡಿದವರ ವಿರುದ್ಧ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಕ್ರಮಕ್ಕೆ ಬಿಗಿಪಟ್ಟು ಹಿಡಿದಿದ್ದಾರೆ. ಅರಣ್ಯ ಇಲಾಖೆ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ